Women's day celebration at IPH field station

ಮಾರ್ಚ್ 8 2021, ಬಿಳಿರಂಗನ ಬೆಟ್ಟ : ಸೋಲಿಗ ಆದಿವಾಸಿ ಮಹಿಳೆಯರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಗ್ರಾಮಪಂಚಾಯತ್ ಬಿಳಿರಂಗನ ಬೆಟ್ಟ, ಜಿಲ್ಲಾ ಬುಡಕಟ್ಟು ಸೋಲಿಗ ಅಭಿವೃದ್ಧಿ ಸಂಘ (ರಿ), ಇನ್ಸ್ಟಿಟ್ಯೂಟ್ ಪಬ್ಲಿಕ್ ಹೆಲ್ತ್ ಬೆಂಗಳೂರು ಮತ್ತು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಇದರ ಸಹಯೋಗದೊಂದಿಗೆ ಸೋಲಿಗ ಆದಿವಾಸಿ ಮಹಿಳೆಯರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಂಗಮ್ಮ ನಾಗರಾಜ್ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾಕ್ಟರ್. ತಾನ್ಯ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು, ಡಾ. ಸಿ ಮಾದೇಗೌಡರು ಮಹಿಳೆಯ ದಿನಾಚರಣೆಯ ಪರವಾಗಿ ಅನಾದಿಕಾಲದಿಂದಲೂ ಆದಿವಾಸಿಗಳಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನರು, ಆದರೆ ಇತ್ತೀಚಿನ ಕಾಲಘಟ್ಟಕ್ಕೆ ತಕ್ಕಂತೆ ಸಮುದಾಯದಲ್ಲಿ ಬದಲಾವಣೆಗಳನ್ನು ಕಾಣುತ್ತಿದ್ದೇವೆ, ಆದರೆ ಸಮುದಾಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವೆಂದು ತಿಳಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಇನ್ಸ್ಟಿಟ್ಯೂಟ್ ಪಬ್ಲಿಕ್ ಹೆಲ್ತ್ ಬೆಂಗಳೂರು ಇದರ ಸಹಾಯಕ ನಿರ್ದೇಶಕರಾದ ಡಾಕ್ಟರ್ ಪ್ರಶಾಂತ , ಎಲ್ಲಾ ಆದಿವಾಸಿ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಪರವಾಗಿ ಶುಭ ಹಾರೈಸಿದರು, ಹಾಗೂ ಗ್ರಾಮ ಪಂಚಾಯತ್ ಎಲ್ಲಾ ಸದಸ್ಯರು ಶುಭಹಾರೈಸಿದರು, ಕಾರ್ಯಕ್ರಮದಲ್ಲಿ ಜಿಲ್ಲಾ ಬುಡಕಟ್ಟು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಸಿ ಮಾದೇವ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಕೆತಮ್ಮ, ಡಾಕ್ಟರ್ ಯೋಗೀಶ್, ಡಾಕ್ಟರ್ ಮಾನಸ, ಮಹಂತೇಶ್ ಇತರರು ಭಾಗವಹಿಸಿದ್ದರು, ಶ್ರೀಮತಿ ಮಹಾದೇವಮ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪೋಡುಗಳಲ್ಲಿ ಮಧ್ಯಪಾನ ಮತ್ತು ಧೂಮಪಾನ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇದರ ವಿರುದ್ಧ ಜಾಗ್ರತಿ ಮತ್ತು ಹೋರಾಟ ಮಾಡಬೇಕೆಂದು ಸಮುದಾಯದ ಮಹಿಳೆಯರು ಚರ್ಚೆ ಮಾಡಿದರು.