ಆದಿವಾಸಿ ಸಮುದಾಯದ 25ನೇ ವರ್ಷದ

ಸೋಲಿಗ ಅಭಿವೃದ್ಧಿ ಸಂಘದ ಬೆಳ್ಳಿ ಹಬ್ಬ ದಿನಾಂಕ 28/02/2020 ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಪೊನ್ನಾಚಿ ಗ್ರಾಮದಲ್ಲಿ ಸೋಲಿಗ ಅಭಿವೃದ್ಧಿ ಸಂಘದ 25ನೇ ವರ್ಷದ ಬೆಳ್ಳಿ ಮಹೋತ್ಸವವನ್ನು ಶಾಸಕರಾದ ಆರ್ ನರೇಂದ್ರ ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಹೆಚ್ಚು ಮಹತ್ವ ನೀಡಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಮಾತನಾಡಿ ಮದ್ಯಪಾನ ಮತ್ತು ಗಾಂಜಾ ಸೇವನೆಯಿಂದ ಬಲಿಯಾಗುತ್ತಿದ್ದು ಆದಿವಾಸಿಗಳು 60 ವರ್ಷಗಳ ಕಾಲ ಬದುಕುವುದು ಹೆಚ್ಚು ಇಂಥ ಪರಿಸ್ಥಿತಿಯಿಂದ ಎಲ್ಲಾ ಪೋಡುಗಳಲ್ಲಿ ಮದ್ಯ ಮಾರಾಟ ಮತ್ತು ಗಾಂಜಾ ಸೇವನೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು. ಇನ್ಸ್ಟಿಟ್ಯೂಟ್ ಪಬ್ಲಿಕ್ ಹೆಲ್ತ್ ಬೆಂಗಳೂರು ಸಂಸ್ಥೆಯ ವತಿಯಿಂದ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಯಿತು. ಈ ಶಿಬಿರದಲ್ಲಿ 250ಕ್ಕೂ ಹೆಚ್ಚು ಸಮುದಾಯ ಬಾಂಧವರು ತಮ್ಮ ದೇಹದ ತೂಕದ ಪರೀಕ್ಷೆ, ಎತ್ತರ ಹಾಗೂ ಹಿಮಗ್ಲೋಬಿನ್, ಸಕ್ಕರೆ ಕಾಯಿಲೆ ಇದರ ಬಗ್ಗೆ ಉಚಿತ ತಪಾಸಣೆ ಮಾಡಲಾಯಿತು. ಈ ಶಿಬಿರದಲ್ಲಿ ಡಾಕ್ಟರ್ ಪ್ರಶಾಂತ್ ಸಹನಿರ್ದೇಶಕರು ಇನ್ಸ್ಟಿಟ್ಯೂಟ್ ಪಬ್ಲಿಕ್ ಹೆಲ್ತ್ ಬೆಂಗಳೂರು. ಡಾಕ್ಟರ್ ಯೋಗೇಶ್ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು. ಹಾಗೆ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇನ್ಸ್ಟಿಟ್ಯೂಟ್ ಪಬ್ಲಿಕ್ ಹೆಲ್ತ್ ಬೆಂಗಳೂರು ಸಿಬ್ಬಂದಿ ವರ್ಗದವರಿಂದ ಕುಡಿತದಿಂದ ಆಗುವ ದುಷ್ಪರಿಣಾಮಗಳು ಇದರ ಬಗ್ಗೆ ಕಿರು ನಾಟಕ ಪ್ರದರ್ಶನ ಮಾಡಿ ಸಮುದಾಯದವರಿಗೆ ಅರಿವು ಮೂಡಿಸಲಾಯಿತು.

ಎರಡನೇ ದಿನದ ವಿಚಾರ ಸಂಕಿರಣದಲ್ಲಿ ಆದಿವಾಸಿಗಳ ಸಮುದಾಯದ ಆರೋಗ್ಯದ ಬಗ್ಗೆ ಮಹದೇವಯ್ಯ ಸಮುದಾಯ ಆರೋಗ್ಯ ಕಾರ್ಯಕರ್ತರು ಪ್ರಬಂಧ ಮಂಡನೆ ಮಾಡಿದರು. ಈ ಪ್ರಬಂಧ ಮಂಡನೆಗೆ ಇನ್ಸ್ಟಿಟ್ಯೂಟ್ ಪಬ್ಲಿಕ್ ಹೆಲ್ತ್ ಬೆಂಗಳೂರು ಇದರ ಸಹ ನಿರ್ದೇಶಕರಾದ ಡಾಕ್ಟರ್ ಪ್ರಶಾಂತ್ ಸಹಕರಿಸಿದರು.

This event was part of public engagement activities planned under Towards Health Equity & Transformative Action on Tribal Health (THETA) project under the Wellcome Trust/DBT India Alliance Fellowship to Dr. Prashanth N S

eSWaRM.2023-B batch Admissions open

The eSWaRM course will enable health professionals to write scientific research articles that can be published and to equip them with skills to cite and manage references/ bibliography while writing using a reference management tool such as Mendeley.

You have Successfully Subscribed!