ನನ್ನ ಸಮಸ್ಯೆಗೆ ಏನೂ ಉತ್ತರ..........?

ಆರೋಗ್ಯ-ಉಪಕೇಂದ್ರದ ಕಿರಿಯ ಮಹಿಳಾ ಅರೋಗ್ಯ ಸಹಾಯಕಿಯರು ತಮ್ಮ ಕ್ಷೇತ್ರದಲ್ಲಿ ಎದಿರುಸುತ್ತಿರುವಾ ಸಮಸ್ಯೆಗಳು ಮೇಲೆ ನಮ್ಮ ಕ್ಷೇತ್ರ ಭೇಟಿಯ ಅನುಬವಗಳು

ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯಗಳ ನಡುವೆ ಅತ್ಯಂತ ಬಾಹ್ಯ ಮತ್ತು ಜನರ ಆರೋಗ್ಯಕ್ಕೆ ಸಂಬಧಿಸಿದ ಮೊದಲ ಆರೋಗ್ಯ ಸಂಪರ್ಕ ಕೇಂದ್ರವೆಂದರೆ ಅದು ಆರೋಗ್ಯ-ಉಪಕೇಂದ್ರ. ಪ್ರತಿ ಆರೋಗ್ಯ ಉಪಕೇಂದ್ರಕ್ಕೆ ಸಾಮಾನ್ಯ ಪ್ರದೇಶದಲ್ಲಿ ೫೦೦೦ ಜನಸಂಖ್ಯೆ ಇರಬೇಕಾಗಿದ್ದು ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ೩೦೦೦ ಜನಸಂಖ್ಯೆ ಇರಬೇಕು ಎಂಬುದು ನಿಯಮವಿದೆ ಆದರೆ ಪ್ರಸ್ತುತವಾಗಿ ಸಾಮಾನ್ಯ ಪ್ರದೇಶದ ಕೆಲವು ಆರೋಗ್ಯ ಉಪಕೇಂದ್ರಗಳಲ್ಲಿ ೭೦೦೦ ಕಿಂತ ಹೆಚ್ಚು ಹಾಗು ೨೦೦೦ ಕಡಿಮೆ ಜನಸಂಖ್ಯೆ ಕೂಡ ಹೊಂದಿವೆ, ಪ್ರಸ್ತುತವಾಗಿ ಭಾರತದಲ್ಲಿ ೧,೪೫,೨೭೨ ಆರೋಗ್ಯ ಉಪ-ಕೇಂದ್ರಗಳು ಕಾರ್ಯನಿರ್ವಹಣೆಯಲ್ಲಿವೆ. ಪ್ರತಿಯೊಂದು ಆರೋಗ್ಯ ಉಪಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ (ಕಿ.ಮ.ಆ.ಸ) ಮತ್ತು ಕಿರಿಯ ಪುರುಷ ಆರೋಗ್ಯ ಸಹಾಯಕ (ಕಿ.ಪು.ಆ.ಸ) ಎಂಬ ಸಿಬ್ಬಂದಿಗಳ ಮೂಲಕ ಈ ಕೆಳಗಿನ ಸೇವೆಗಳನ್ನು ಒದಗಿಸಲಾಗುತ್ತಿದೆ. ಉಪಕೇಂದ್ರದಲ್ಲಿ ದೊರುಕುವ ಮುಖ್ಯ ಸೇವೆಗಳು ಎಂದರೆ; ತಾಯಿ ಮತ್ತು ಮಗುವಿನ ಆರೋಗ್ಯ ಕಾಳಜಿ ಅವರ ಪೌಷ್ಟಿಕತೆಯ ಬಗ್ಗೆ ಪೋಷಣೆ, ಮಕ್ಕಳಿಗೆ ಮಾರಕ ರೋಗ-ನಿರೋಧಕ ಲಸಿಕೆ ನೀಡಿಕೆ, ಅತಿಸಾರ ನಿಯಂತ್ರಣ, ಸಂಪರ್ಕ ರೋಗಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಅವಗಳ ನಿಯಂತ್ರಣ ಹಾಗೂ ಪರಸ್ಪರ ಸಂವಹನ ಮುಖಾಂತರ ವರ್ತನೆ ಬದಲಾವಣೆ. ಪುರುಷ, ಮಹಿಳೆ ಮತ್ತು ಮಕ್ಕಳಿಗೆ ಅವಶ್ಯಕ ಆರೋಗ್ಯ ಬೇಡಿಕೆಗಳಿಗೆ ಬೇಕಾದ ಚಿಕ್ಕವ್ಯಾದಿಗಳಿಗೆ ಮೂಲ ಹಾಗು ತುರ್ತು ಔಷಧಿಗಳು ಕೂಡ ಲಭ್ಯವಿರುತ್ತವೆ.
ಆರೋಗ್ಯ ಇಲಾಖೆಯ ಅಡಿಯಲ್ಲಿ ಯಾವುದೇ ಹೊಸ ಕಾರ್ಯಕ್ರಮಗಳನ್ನು ಪರಿಚಯ ಮಾಡಿ, ಆ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಟಾನವಾಗಬೇಕಾದರೆ, ಆರೋಗ್ಯ-ಉಪಕೇಂದ್ರ ಹಾಗೂ ಅದರ ಕಿ.ಮ.ಆ.ಸ ಪಾತ್ರ ಬಹಳ ಮುಖ್ಯ ಹಾಗೂ ಅವಶ್ಯಕ. ಈಗಾಗಲೆ ಆರೋಗ್ಯ ಇಲಾಖೆಯಿಂದ ಹಲವಾರು ಕಾರ್ಯಕ್ರಮಗಳು ಅನುಷ್ಟಾನವಾಗಿ ಕೆಲವು ಯಶಸ್ವಿ ಹಂತದಲ್ಲಿದ್ದರೆ ಇನ್ನು ಕೇಲವು ಕಾರ್ಯಕ್ರಮಗಳು ಗುಣಾತ್ಮಕವಾಗಿ ಯಶಸ್ವಿಹಂತದಲ್ಲಿಲದಿದ್ದರು ಕು೦ಟುತ್ತಾ ಸಾಗಿವೆ. ಇದಕ್ಕೆ ಕಾರಣ ಏನು ಎಂದು ನೋಡುತ್ತಾ ಹೋದರೆ ಆರೋಗ್ಯ ಕಾರ್ಯಕ್ಷೇತ್ರದ ಮೂಲಮಟ್ಟವಾದ ಆರೋಗ್ಯ ಉಪಕೇಂದ್ರ ಹಾಗೂ ಕಿ.ಮ.ಆ.ಸ ಎದಿರುಸುತ್ತಿರುವ ಹಲವಾರು ಸಮಸ್ಯೆಗಳು ಪರೋಕ್ಷವಾಗಿ ಈ ಕಾರ್ಯಕ್ರಮಗಳ ಅನುಷ್ಟಾನ ಗುಣಾತ್ಮಕತೆಯಲ್ಲಿ ಕಡಿಮೆ ಆಗಿರುವುದಕ್ಕೆ ಕಾರಣ ಕಂಡುಬರುತ್ತದೆ
ಹಾಗಾದರೆ, ಆರೋಗ್ಯ-ಉಪಕೇಂದ್ರ ಮತ್ತು ಅದರ ಕಿ.ಮಾ.ಆ.ಸ ಎದಿರುಸುತ್ತಿರುವ ಸಮಸ್ಯೆಗಳಾದರು ಏನು? ನಮ್ಮ ಕಾರ್ಯಕೇತ್ರ ಭೇಟಿ ಸಂರ್ದಭದಲ್ಲಿ ಕೆಲವು ಆರೋಗ್ಯ-ಉಪಕೇಂದ್ರ ಕಿ.ಮಾ.ಆ.ಸ ನಮ್ಮೊಡನೆ ಹಂಚಿಕೊಂಡಿರುವ ಕೆಲವು ಸಮಸ್ಯೆಗಳುನ್ನು ಇಲ್ಲಿ ಪ್ರಸ್ತಾಪಿಸಾಲು ಇಚ್ಚಿಸುತ್ತೇನೆ; ವರದಿ ತಯ್ಯಾರಿ ಮತ್ತು ರೆಜಿಸ್ಟರ ಬರೆಯುವದು, ಏನ್.ಆರ್.ಏಚ್.ಎಮ್ (ರಾಷ್ತ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ) ಬರುವುದಕಿ೦ಥ ಮುಂಚೆ ೧೬ ರಷ್ಟು ರೆಜಿಸ್ಟರಗಳು ಪ್ರತಿ ಕಿ.ಪು.ಆ.ಸ ಬರೆಯುತ್ತಾ ಬಂದಿದ್ದು ಈಗ ಇವುಗಳ ಸಂಖ್ಯೆ ಹೆಚ್ಚಾಗಿದೆ. ದಿನಗಳ ಪೂರ್ತಿ ಹಳ್ಳಿಗಳ ಮತ್ತು ಮನೆ ಭೇಟಿ ಮಾಡಿ ಮರಳಿ ಮನೆಗೆ ಬಂದು ೧೬ ಕಿಂತ ಹೆಚ್ಚಿನ ರೆಜಿಸ್ಟರಗಳ ನಿರ್ವಹಣೆ ಮಾಡುವುದು ತುಂಬಾ ಕಷ್ಟ. ಅಲ್ಲದೆ ವಿವಿಧ ಕಾರ್ಯಕ್ರಮದ ಮೇಲಿನ ಅಧಿಕಾರಗಳು ಪ್ರತಿತಿಂಗಳು ಒಂದಲ್ಲಾ ಒಂದು ವರದಿ ಸ್ವರೂಪದಲ್ಲಿ ಹೊಸ ಬದಲಾವಣೆ ಮಾಡಿ, ತತಕ್ಷಣ ವರದಿ ಸಲ್ಲಿಸುವಂತೆ ಕೇಳುತ್ತಾರೆ, ತತಕ್ಷಣ ವರದಿ ಸಲ್ಲಿಸುವದು, ಅದರಲ್ಲಿ ಹೊಸ ಸ್ವರೂಪದ ವರದಿ ಸಲ್ಲಿಸುವುದು ತುಂಬಾ ಕಷ್ಟದಕೆಲಸ.
ಏನ್.ಆರ್.ಏಚ್.ಎಮ್ ಬಂದನಂತರ ಪ್ರತಿ ಆರೋಗ್ಯ-ಉಪಕೇಂದ್ರಗಳಿಗೆ ರೂ: ೧೦,೦೦೦ ಮುಕ್ತ ನಿಧಿ ನೀಡುತ್ತಿದ್ದು, ಆ ಹಣವನ್ನು ಉಪ ಕೇಂದ್ರಗಳ ಸಣ್ಣ-ಪುಟ್ಟ ದುರಸ್ತಿ. ಅನಿರೀಕ್ಷಿತ ಅವಶ್ಯಕ ಘಟನೆಗಳಿಗೆ ಮತ್ತು ತಕ್ಷಣದ/ತುರ್ತು ಔಷಧಿ ವೆಚ್ಚವನ್ನು ಪೂರೈಸಲು ಹಾಗೂ ಆರೋಗ್ಯ-ಉಪಕೇಂದ್ರಕ್ಕೆ ಬೇಕಾಗುವ ಸಣ್ಣ-ಪುಟ್ಟ ಸಲಕರಣೆಗಳ ಖರೀದಿಗೆ ಈ ಹಣದಿಂದ ವೆಚ್ಚಮಾಡಬಹುದು. ಏನ್.ಆರ್.ಏಚ್.ಎಮ್ ಅಡಿಯಲ್ಲಿ ಪ್ರತಿ ಉಪ ಕೇಂದ್ರಗಳಿಗೆ ರೂ ೧೦,೦೦೦ ನೀಡಿರುವದು ತು೦ಬಾ ಸಂತೋಷದ ವಿಷಯ ಆದರೆ ಈ ಹಣದಲ್ಲಿ ಯಾವುದೇ ಹಣ ವೆಚ್ಚ ಮಾಡಬೇಕಾದ್ದಲ್ಲಿ, ವೆಚ್ಚಮಾಡಬೇಕಾದ ಚೆಕ್ ಮೇಲೆ ಗ್ರಾಮ ಪಂಚಾಯತಿಯ ಅಧ್ಯಕ್ಷರ ಸಹಿ ಇರಲೇಬೇಕು, ಪ್ರತಿ ಕಿ.ಪು.ಆ.ಸ ತಮ್ಮ ವೃತ್ತಿಗೆ ಸಂಬ೦ದಿಸಿದ ಎಷ್ಟೋ ಮುಖ್ಯ ಕೆಲಸಗಳನ್ನು ಬದಿಗಿಟ್ಟು ಈ ಒಂದು ಸಹಿಗಾಗಿ ಮೂರ ರಿಂದ ನಾಲ್ಕು ಬಾರಿ ಗ್ರಾಮ ಪಂಚಾಯತಿಯ ಅಧ್ಯಕ್ಷರ ಮನೆಗೆ ಅಲೆದಾಡಬೇಕಾಗುತದೆ, ಈ ಒಂದು ಓಡಾಟದಲ್ಲಿ ತಮ್ಮ ಅಮುಲ್ಲ್ಯವಾದ ಸಮಯ ವ್ಯಯವಾಗುತ್ತಿದೆ ಎಂಬುದು ಕಿ.ಮ್. ಆ. ಸಹಾಯಕಿಯರ ಅಭಿಪ್ರಾಯ.
ಎಂ,ಸಿ,ಟಿ,ಎಸ್(ತಾಯಿ ಮತ್ತು ಮಗುವಿನ ಟ್ರ್ಯಾಕಿಂಗ್ ವ್ಯವಸ್ಥೆ) ಮತ್ತು ಎಚ್,ಎಮ,ಆಯ್,ಎಸ್ (ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ) ಗಳನ್ನೂ ಪರಿಚಯಿಸಿ ಸುಮಾರು ೩-೪ ವರ್ಷಗಳು ಕಳೆದರೂ ಕೂಡಾ ಇವಗಳು ಇನ್ನು ಮುಖ್ಯವಾಹಿನಿಗೆ ಬರುತ್ತಿಲ್ಲಾ ಏಕೆ ಎಂದು ಕಾರಣ ಹುಡುಕುತ್ತಾ ಹೋದರೆ; ಕೆಲವು ಕಿ.ಪು.ಆ.ಸಹಾಯಕಿಯರು ಇನ್ನು ಸಮುದಾಯ ಆಧಾರಿತ (Community based) ಅಥವಾ ಸೌಲಭ್ಯ ಆಧಾರಿತ (Facility based) ಕೇಂದ್ರಗಳ ವರದಿ ವ್ಯವಸ್ಥೆಯ ಅರಿತುಕೊಳ್ಳುವ ಗೊಂದಲದಲ್ಲಿ ಕೆಲವರು ಇದ್ದರೆ ಇನ್ನು ಕೆಲವರು ಎಂ,ಸಿ,ಟಿ,ಎಸ್ ಅಂತಹ ತಂತ್ರಜ್ಞಾನಕ್ಕೆ ಮೊಬೈಲ ಮೊಲಕ ವರದಿ ಸಲ್ಲಿಸವುದರಲ್ಲಿ ಪರದಾಡುತ್ತಿದ್ದಾರೆ, ಹಳೆ ತೆಲಮಾರಿನ ಕೆಲವು ಕಿ.ಮ.ಸಹಾಯಕಿಯರು ಕಾರ್ಯಕ್ಷೇತ್ರ ಭೇಟಿ ಮತ್ತು ಮನೆಯ ಬೇಟಿ, ಆಪ್ತಾಸಮಾಲೋಚನೆ ಹಾಗು ಹೆರಿಗೆ ಮಾಡುವದು, ಇತ್ಯಾದಿ. ಹೀಗೆ ಆರೋಗ್ಯಕ್ಕೆ ಸಂಬದಿಸಿದ ಇತರೆ ಚಟುವಟಿಕೆಗಳಲ್ಲಿ ನೈಪುಣ್ಯತೆ ಹೊಂದಿದ್ದು, ಆದರೆ ಎಂ.ಸಿ.ಟಿ.ಎಸ್ ಅಂತಾ ಹೊಸ ತಂತ್ರಜ್ಞಾನಕವನ್ನೂ ತಿಳಿದುಕೊಳ್ಳಲು ಹಾಗು ಅದಕ್ಕೆ ಸಂಬ೦ಧಿಸಿದ ಕೆಲಸ ನಿರ್ವಹಿಸಲು ಪದೆ-ಪದೆ ಇನ್ನೊಬ್ಬರಿಂದ ಸಹಾಯ ಕೇಳುವುದು ಪ್ರತಿ ಕಿ.ಮ.ಸಹಾಯಕಿಯರಿಗೆ ಮುಜುಗರದ ಸಂಗತಿಯಾಗಿದೆ.
ತಾಯಿ ಮತ್ತು ಶಿಶು ಮರಣ ಸಂಭವಿಸಿದಾಗ ಕಿ.ಮ.ಸ ಮನೆಗೆ ಹೋಗಿ ವಿವರವಾಗಿ ವಿಚಾರಣೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಮಾಡಬೇಕಾಗಿರುವುದು ಕಿ.ಮ.ಸ ಕರ್ತವ್ಯ. ಆದರೆ ವಿಚಾರಣೆ ನಡಸಲು ಪದೆ-ಪದೆ ಅವರ ಮನೆಗೆ ಹೋದಾಗ, ಆ ಕುಟ೦ಬದ ಸದಸ್ಯರು ಹಾಗು ನೆರೆಯ ಜನರು ಕಿ.ಮ.ಸಹಾಯಕಿಯರನ್ನು ತಪ್ಪಾಗಿ ಭಾವಿಸುತ್ತಾರೆ. ಕಿ.ಮ.ಆ.ಸಹಾಯಕಿಗೆ ಸರಕಾರದಿಂದ ಹೆಚ್ಚಿನ ದುಡ್ಡು ಸಿಗಬಹುದು, ಆದರೆ ಆ ದುಡ್ಡುನ್ನು ಫಲಾನುಭವಿಗಳಿಗೆ ಕೊಡುತ್ತಿಲ್ಲಾ ಎಂದು ಸಂಶಯ ವ್ಯೆಕ್ತಪಡಿತ್ತಾರೆ. ಕಿ.ಮ.ಸಹಾಯಕಿಯು ಕ್ಷೇತ್ರದಲ್ಲಿ ತಮ್ಮ ಕರ್ತವ್ಯಗಳನ್ನು ಸರಿಯಾಗಿ ಮಾಡಿದ್ದರೂ ಸಹ ಯಾವುದೋ ಕಾರಣಾಂತರಗಳಿಂದ ಯಾವಾಗಲಾದರೂ ತಾಯಿ ಅಥವಾ ಶಿಶುಮಣರವಾದಾಗ, ಇಲಾಖೆಯ ಮೇಲಾಧಿಕಾರಿಗಳು ನಡೆಸುವ ತಾಯಿ ಹಾಗು ಶಿಶು ಮರಣದ ವಿಚಾರಣೆ (Maternal & Infant death Audit ) ಸಂದರ್ಭದಲ್ಲಿ ತಪ್ಪು ಎಲ್ಲಿ ನಡೆದಿದೆ? ಯಾರಿಂದ ನಡೆದಿದೆ? ಯಾತಗೋಸ್ಕರ ನಡೆದಿದೆ? ಎಂಬುದು ವಿಚಾರಿಸದೆ ಎಲ್ಲವು ಕಿ. ಮ. ಆ. ಸಹಾಯಾಕಿಯರದೆ ತಪ್ಪಿನಿಂದಲೆ ಯಾಗಿದೆ ಎಂದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಜನರ ಮುಂದೆ ನಿಂದಿಸುತ್ತಾರೆ. ಎಷ್ಟೋ ವರ್ಷಗಳಿಂದ ಕಿ.ಮ.ಆ.ಸ ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಸೇವೆ ನೀಡುತ್ತಾ ಬಂದಿದ್ದರೂ ಆ ಸೇವೆಗೆ ಕೂಡ ಪರಿಗಣನೆ ಕೊಡದೆ, ಯಾರೋ ಮಾಡಿದ ತಪ್ಪಿನಿಂದಾಗಿ ಕಿ.ಮ.ಆ.ಸ. ನಿಂದನೆಗೆ ಒಳಗಾಗಭೇಕಾದ ಸಂದರ್ಭ ಉಂಟಾಗಿದೆ ಇದರಿಂದ ಬಹಳ ದುಃಖವಾಗುತ್ತದೆ ಎಂಬದು ಒಬ್ಬ ಹಿರಿಯ ಆರೋಗ್ಯ ಮಹಿಳಾ ಸಹಾಯಾಕಿಯ ದುಃಖದ ಮಾತುಗಳು.
ಈ ಎಲ್ಲಾ ಸಮಸ್ಯಗಳಿಗೆ ಪರಿಹಾರವಿಲ್ಲವೇ? ಯಾವ ರೀತಿಯಾಗಿ ಈ ಸಮಸ್ಯೆಗಳಿಗೆ ಪರಿಹರಿಸಿ ಪ್ರತಿ ಕಿ.ಮ.ಆ,ಸ ವೃತ್ತಿಯಲ್ಲಿ ಗುಣಾತ್ಮಕತೆ ಕಾಯ್ದುಕೊಳ್ಳಲು ಹಾಗು ಪ್ರೇರಣೆಯುತವಾಗಿ ಕೆಲಸ ನಿರ್ವಹಿಸಲು ಹೇಗೆ ಸಹಕಾರ ನೀಡಬಹುದು: ಎಲ್ಲಾ ಆರೋಗ್ಯ-ಉಪಕೇಂದ್ರಕ್ಕೆ ನಿಯಮದ ಪ್ರಕಾರ ಸಮಾನ ಜನಸಂಖ್ಯೆಯ ಹಂಚಿಕೆ ಅಥವಾ ಪುನಃಸ್ಸಂಘಟನೆ, ಪ್ರೇರಣೆ ಆಧಾರಿತವಾದ ಮೇಲ್ವಿಚಾರಣೆ, ವಿವಿದ ಕಾರ್ಯಕ್ರಮಗಳಿಗೆ ತಕ್ಕ೦ತೆ ನಿಯತ ಹಾಗು ಚೈತನ್ಯದಾಯಕ ಗುಣಮಟ್ಟದ ತರಬೇತಿ, ಪ್ರಸ್ತುತ ಸಲ್ಲಿಸುತ್ತಿರುವ ವರದಿ ಪದ್ದತಿಯಲ್ಲಿ ಬದಲಾವಣೆ, ಉತ್ತಮ ಕಾರ್ಯನಿರತ ಕಿ.ಮ.ಆ.ಸಹಾಯಕಿಯನ್ನು ಗುರ್ತಿಸಿ ವಾರ್ಷಿಕವಾಗಿ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇ೦ದ್ರಮಟ್ಟದಲ್ಲಿ ಸನ್ಮಾನಿಸುವುದರ ಮುಖಾ೦ತರ, ಪ್ರಸ್ತುತವಾಗಿ ಕಿ.ಮ.ಆ.ಸಹಾಯಕಿಯರು ಎದುರಿಸುತ್ತಿರುವ ಸಮಸ್ಯೆಗಳು ಪರಿಹರಿಸಿ, ಅರೋಗ್ಯ ಕಾರ್ಯಕ್ರಮಗಳು ಯಶಸ್ವಿಗೆ ವಿಷೇಶವಾಗಿ ಗುಣಾತ್ಮಕ ಕಾರ್ಯಕ್ರಮಗಳ ಅನುಷ್ಟಾನಕ್ಕೆ ನಾ೦ದಿಹಾಡಬಹುದು.