On 9th August 2022, Institute of Public Health Bengaluru under the initiative Centre for Training, Research, and Innovation in Tribal Health(CTRITH) and Jilla Budakattu Girijana Abhvriddhi Sangha, Chamarajanagar District had jointly organized an online webinar on the occasion of the International Day of the World’s Indigenous Peoples focusing on the theme of the year “The role of indigenous women in the preservation and transmission of traditional knowledge: Local context”.
Three women representatives/community leaders from 3 different local Adivasi communities participated as speakers and Dr. Prashanth N S moderated the session. Smt. Gouramma from Iruliga Community, Ramanagar District, Smt. Puttamma from Solega Community Chamarajanagar District and Ms.Susheela from Koraga community, Udupi District participated and shared the rich culture and practices among their society and shed light on the role of indigenous women in the preservation and transmission of traditional knowledge. The event was well attended by individuals and people working on tribal health, researchers, PhD students from various institutions.
ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಹಾಗೂ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ, ಚಾಮರಾಜನಗರ ಜಂಟಿಯಾಗಿ ವಿಶ್ವ ಆದಿವಾಸಿ ದಿನದ ಅಂಗವಾಗಿ ಆಗಸ್ಟ್ 9ರಂದು ಸೆಂಟರ್ ಫಾರ್ ಟ್ರೈನಿಂಗ್ ರಿಸರ್ಚ್ ಅಂಡ್ ಇನ್ನೋವೇಶನ್ ಇನ್ ಟ್ರೈಬಲ್ ಹೆಲ್ತ್(CTRITH) ಯೋಜನೆಯಡಿಯಲ್ಲಿ ಆನ್ಲೈನ್ ವೆಬಿನಾರ್ ಒಂದನ್ನು ಆಯೋಜಿಸಲಾಗಿತ್ತು. “ಆದಿವಾಸಿ ಜನರ ಪಾರಂಪರಿಕ ಜ್ಞಾನದ ಸಂರಕ್ಷಣೆ ಹಾಗೂ ಪ್ರಸರಣದಲ್ಲಿ ಸಮುದಾಯದ ಮಹಿಳೆಯರ ಪಾತ್ರ” ಎಂಬ ವಿಶೇಷ ವಿಷಯದ ಕುರಿತು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸ್ಥಳೀಯ ಆದಿವಾಸಿ ಸಮುದಾಯಗಳ ಮೂವರು ಮಹಿಳಾ ಪ್ರತಿನಿಧಿಗಳು/ಸಮುದಾಯ ಮುಖಂಡರು ಭಾಷಣಕಾರರಾಗಿ ಭಾಗವಹಿಸಿದ್ದರು ಮತ್ತು ಡಾ. ಪ್ರಶಾಂತ್ ಎನ್.ಎಸ್., ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಾಮನಗರ ಜಿಲ್ಲೆಯ ಇರುಳಿಗ ಸಮುದಾಯದ ಶ್ರೀಮತಿ. ಗೌರಮ್ಮ, ಚಾಮರಾಜನಗರ ಜಿಲ್ಲೆಯ ಸೋಲಿಗ ಸಮುದಾಯದ ಶ್ರೀಮತಿ. ಪುಟ್ಟಮ್ಮ ಹಾಗೂ ಉಡುಪಿ ಜಿಲ್ಲೆಯ ಕೊರಗ ಸಮುದಾಯದ ಕು. ಸುಶೀಲಾ ರವರು ಭಾಗವಹಿಸಿ ತಮ್ಮ ಸಮುದಾಯದಲ್ಲಿನ ಶ್ರೀಮಂತ ಸಂಸ್ಕೃತಿ ಮತ್ತು ವಿಶಿಷ್ಟ ಆಚರಣೆಗಳನ್ನು ಹಂಚಿಕೊಂಡರಲ್ಲದೇ, ಸಾಂಪ್ರದಾಯಿಕ ಜ್ಞಾನದ ಸಂರಕ್ಷಣೆ ಮತ್ತು ಪ್ರಸರಣದಲ್ಲಿ ತಮ್ಮ ಪಾತ್ರಗಳೇನು ಎಂಬುದರ ಮೇಲೆ ಬೆಳಕು ಚೆಲ್ಲಿದರು. ಕಾರ್ಯಕ್ರಮದಲ್ಲಿ ಆದಿವಾಸಿಗಳ ಆರೋಗ್ಯದ ಬಗ್ಗೆ ಕೆಲಸ ಮಾಡುವ ವ್ಯಕ್ತಿಗಳು, ಸ್ಥಳೀಯ ಸಮುದಾಯದ ಮುಖಂಡರು, ತಜ್ಞರು, ಸಂಶೋಧಕರು, ವಿವಿಧ ಸಂಸ್ಥೆಗಳ ಪಿಎಚ್‌ಡಿ ವಿದ್ಯಾರ್ಥಿಗಳು, ಮತ್ತಿತರರು ಭಾಗವಹಿಸಿದ್ದರು.
ಈ ಕಾರ್ಯಕ್ರಮದ ರೆಕಾರ್ಡಿಂಗ್ ಇಲ್ಲಿದೆ:
Here is the recording of the webinar available to watch: