ಭಾರತದಲ್ಲಿ 1986 ರಲ್ಲಿ HIV -ಸೋಂಕನ್ನು ಪತ್ತೆ ಹಚ್ಚಲಾಯಿತು, 25 ವರ್ಷ ಕಳೆದರು  ನಮ್ಮ ದೇಶದಲ್ಲಿ HIV -ಸೋಂಕಿತರ ಬಗ್ಗೆ ಇರುವ ಕಳಂಕ ಮತ್ತು ತಾರತಮ್ಯ ಅಷ್ಟೇನೂ  ಕಡಿಮೆಯಾಗಿಲ್ಲ, ಇದಕ್ಕೆ ಸಾಕಸ್ಟು ಉದಾಹರಣೆಗಳಿವೆ, HIV-ಯಿಂದ ಗಂಡ ಮರಣಹೊಂದಿದ ವಿದವೆಯನ್ನೂ ಮನೆಯಿಂದ ಹೊರಹಾಕುವುದು ಗ್ರಾಮವನ್ನು ಬಿಡುವಂತೆ ಒತ್ತಾಯ ಮಾಡುವದು, ಮಕ್ಕಳುನ್ನು, ಶಾಲೆಯಿಂದ ಹೊರಗೆಹಾಕುವುದು ಅಥವಾ ಶಾಲೆಗಳಿಗೆ ಪ್ರವೇಶ ಸಿಗದೆಇರುವದು. ಇವೆಲ್ಲವು ಕಳಂಕ ಹಾಗು ತಾರತಮ್ಯಗಳಿಗೆ  ಕೆಲವು ಊದಾಹರಣೆಗಳು.

ಈ ರೀತಿಯ ಘಟನೆಗಳು ಎಷ್ಟೋಬಾರಿ ನಾವು ವಾರ್ತ ಪತ್ರಿಕೆಗಳಲ್ಲಿ ಹಾಗು ನಿಯತಕಾಲಿಕೆಗಳಲ್ಲಿ ಓದುತ್ತಿರುತ್ತೇವೆ ಹಾಗೂ ನಮ್ಮ ಕಣ್ಣುಮುಂದೆ ನಾವು ಮಾಡುವ ಕೆಲಸದ ಕ್ಷೇತ್ರಗಳಲ್ಲಿ (ಆರೋಗ್ಯ್ ಹಾಗೂ ಇತರೆ ಕ್ಷೇತ್ರ) ನಡೆದರೂ ಸಹಾ  ಅಸಹಾಯಕತೆಯಿಂದ ನೋಡುತ್ತಿರುವ ಪ್ರಸ೦ಗಗಳು ಉಂಟು.

HIV-ಸೋಂಕಿತರಲ್ಲಿ ಕಳಂಕ ಮತ್ತು ತಾರತಮ್ಯಕ್ಕೆ ಸಿಲುಕಿ ಇಹಲೋಕ ತ್ಯೆಜಿಸಿದವರಲ್ಲಿ ಕೆಲವರಾದರೆ ಇನ್ನೂ ಕೆಲವರು ಆರ್ಥಿಕವಾಗಿ ಹಿಂದುಳಿದಿದ್ದು ಅವಕಾಶವಾದಿ ಕಾಯಿಲೆಗಳಿಗೆ ಬಲಿಯಾಗಿ ಸೂಕ್ತ ಚಿಕಿತ್ಸೆ ಸಿಗದೆ ಸತ್ತಿರುವುದು೦ಟು. ಇದಕ್ಕೆಲ್ಲಾ ಕಾರಣ ಅವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಮಾಹಿತಿ, ತಿಳುವಳಿಕೆ ಹಾಗು ಚಿಕಿತ್ಸೆ ಸಿಗದಿರುವದು. ಸರಿಯಾದ ಸಮಯದಲ್ಲಿ ಸರಿಯಾದ ಮಾಹಿತಿ, ತಿಳವಳಿಕೆ ಹಾಗೂ ಚಿಕಿತ್ಸೆ ದೊರೆತಿದ್ದರೆ ಎಸ್ಟೋ HIV-ಗೆ ಸ೦ಬದಿಸಿದ ಸಾವುಗಳನ್ನು  ಮತ್ತು ಆತ್ಮಹತ್ಯೆಗಳನ್ನು  ತಪ್ಪಿಸಬುಹುದು ಎಂಬುದಕ್ಕೆ ಈ ಕೆಳಗೆ ಎರಡು ನಿದರ್ಶನಗಳನ್ನು ನೀಡಲಾಗಿದೆ

ಗುಬ್ಬಿ ತಾಲೂಕಿನ ಒಂದು ಹಳ್ಳಿಯ HIV- ಸೋ೦ಕಿತ ಮಹಿಳೆಗೆ  ಮೊದಲ ಹೆರಿಗೆ ಸಿಜೇರಿಯನ್ ಆಗಿತ್ತು.  ಕೆಲವುದಿನಗಳು ನ೦ತರ ಮತ್ತೆ ಅವಳು ಬಸುರಿ ಎ೦ದು ತಿಳಿದು ಬಂತು, ಆಗ ಆಲ್ಲಿಯ ವೈಧ್ಯಾಧಿಕಾರಿ ಮತ್ತು ಕಿರಿಯ ಆರೋಗ್ಯ ಸಹಾಯಕಿ  ಅವಳಿಗೆ ಸಲಹೆ ಮತ್ತು            ಆಪ್ತಸಮಾಲೋಚನೆ ನಡೆಸಿ ಅವಳನ್ನು ಗರ್ಭಪಾತ ಮಾಡಿಕೊಳ್ಳುವಂತೆ ಮನವೊಲಿಸಿದರು, ಕಾರಣ ಅವಳು ತುಂಬಾ ನಿಶಕ್ತಳಾಗಿದ್ದು, ಎರಡನೇ ಮಗವನ್ನು ಹೆರುವ ಪರಿಸ್ತಿತಿಯಲ್ಲಿ ಆಕೆ ಇರಲಿಲ್ಲ. ಆದರೆ ಅವರ ಸಲಹೆ ಆ ಮಹಿಳೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ.

ಆದರೆ ಕಿರಿಯ ಆರೋಗ್ಯ ಸಹಾಯಕಿ ತನ್ನ ದಿನನಿತ್ಯದ ಕೆಲಸವಾದ, ಮನೆಯ ಭೇಟಿಗೆ ಹೋದಾಗೆಲ್ಲಾ ಸತತವಾಗಿ ಆ ಗರ್ಬಿಣಿಯ ಮನೆಗೆ ಭೇಟಿನೀಡಿ  ಅವರ ಯೋಗಕ್ಷೇಮ ವಿಚಾರಿಸುತಿದ್ದರು, ಅವಶ್ಯಕತೆಇದ್ದಾಗ ಸೂಕ್ತ ಸಲಹೆ ಮತ್ತು ಮಾಹಿತಿಯನ್ನೂ ಆಕೆಗೆ ಹಾಗೂ ಮನೆಯವರಿಗೂ ನೀಡುತಿದ್ದು,  ಅಲ್ಲದೆ ಹೆಚ್ಚಿನ ಚೆಕ್-ಅಪಗಾಗಿ ಜಿಲ್ಲಾ ಆಸ್ಪತ್ರೆಗೆ ಕಳಿಸುತ್ತಿದ್ದರು. ಗರ್ಬಿಣಿಗೆ  8 ಮತ್ತು 9 ತಿಂಗಳು  ತುಂಬಿದಾಗ ತಿಂಗಳಿಗೆ ಎರಡು ಸಲ ಮನೆ ಭೇಟಿನಿಡಿ ಅವರ ಯೋಗಕ್ಷೇಮವನ್ನು  ವಿಚಾರಿಸುತ್ತಿದ್ದರು  ಹೆರಿಗೆ ಸಮಯಕ್ಕಿಂತ ಮೊದಲೆ ಹೆರಿಗೆ ನೋವು ಕಾಣಿಸಿಕೊಂಡಾಗ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದರು. ಜಿಲ್ಲಾ ಆಸ್ಪತ್ರೆಯಲ್ಲಿ ಅವರದೆಯಾದ ಹಲವು ಕಾರಣ ಮತ್ತು ಸಮಸ್ಯೆಗಳಿವೆ ಅದನ್ನು ಮು೦ದಿಟ್ಟುಕೊಂಡು ಆಸ್ಪತ್ರೆಯ ಸಿಬ್ಬಂದಿಗಳು  ಆ ಮಹಿಳೆ  HIV- ಸೋಂಕಿತಳೆ೦ದು ಹೇಳಿ ಪ್ರವೇಶ ನಿರಾಕರಿಸಿದರೂ ಕೆಲವು ಸಮಯದ ನಂತರ  ಪ್ರೋಗ್ರಾಮ್ ಆಫೀಸರ ಸಹಾಯದೊಂದಿಗೆ

 

 

ಆ ಗರ್ಭಿಣಿಗೆ ಆಸ್ಪತ್ರೆಯಲ್ಲಿ ಪ್ರವೇಶ ದೊರೆಯಿತು, ಬೆಳಗಿನಜಾವ ಆ ಗರ್ಭಿಣಿ ಯಾವುದೇ ತೊಂದರೆಯಿಲ್ಲದೆ ಗಂಡು ಮಗುವಿಗೆ  ಜನನ ವಿತ್ತಳು. ಆದರೆ ಜನಿಸಿದ  ಕೆಲವೆ ಗಂಟೆಗಳಲ್ಲಿ ­­­LBW(Low birth Wight) ಕಾರಣದಿಂದ ಮಗು ಮರಣಹೊಂದಿತು.

ಇನ್ನೊಂದು ಉದಾಹರಣೆ ಸಹ HIV- ಸೋಂಕಿತ ಮಹಿಳೆಗೆ ಸಂಬಧಿಸಿದ ವಿಷಯ. ಅದೇ ಗುಬ್ಬಿ ತಾಲುಕಿನಲ್ಲಿ ಮಹಿಳೆ  ಗರ್ಭಿಣಿ ಆಗಿದ್ದಾಗ ರಕ್ತ ಪರೀಕ್ಷೆಗೆ ಹೋಗುವಂತೆ ಕಿರಿಯ ಅರೋಗ್ಯ ಸಹಾಯಕಿ ಕೆಲವು ಸಲಹೆ ಹೇಳಿದರು ಸಹ ಆಕೆ ಹೋಗಿರಲಿಲ್ಲ ಹೀಗಿರಲು ಗರ್ಭಿಣಿಗೆ 9 ತಿ೦ಗಳು  ತುಂಬಿತು , ಈ ಸಂರ್ಬದಲ್ಲಿ  ಕಿರಿಯ ಅರೋಗ್ಯ ಸಹಾಯಕಿ ಮದುವೆಗೆ೦ದು  ಒಂದು ತಿಂಗಳು ರಜೆಯಲ್ಲಿದ್ದರು. ಆಶಾ ಕಾರ್ಯಕರ್ತೆಯ ಸಹಾಯದೊಂದಿಗೆ ನಿರಂತರ ಅನುಸರಣೆ ಮಾಡುತಿದ್ದರು  ಹಾಗಾಗಿ  ಮಹಿಳೆಗೆ  9ನೇ  ತಿಂಗಳು ತುಂಬಿದಾಗ  ಕಿರಿಯ ಅರೋಗ್ಯ ಸಹಾಯಕಿ ಹಾಗು ಆಶಾ ಕಾರ್ಯಕರ್ತೆಯ ತಾವೇ  ಸ್ವತಃ ಆ ಮಹಿಳೆಯನ್ನು  ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ PPTCT ಕೇಂದ್ರದಲ್ಲಿ ಹಿವ್- ಪರೀಕ್ಷೆ ಮಾಡಿಸಿದಾಗ , ಆಕೆಯು HIV- Postive ಎ೦ದು ಬಂತು, ಇದರೊಂದಿಗೆ ರಕ್ತಹೀನತೆಯಿಂದ ನರಳುವದಾಗಿ ತಿಳಿದುಬಂತು. ಸೂಕ್ತ ಸಮಯದಲ್ಲಿ ಅವಳಿಗೆ ರಕ್ತ ನೀಡಿದ್ದರಿಂದ, ಆಕೆಗೆ ಹೆರಿಗೆಯೂ ಸಹಜವಾಗಿ ಆಗಿದ್ದು ತಾಯಿ ಮತ್ತು ಮಗು ಕ್ಷೇಮವಾಗಿದ್ದರೆ.

ಸರಕಾರದ ನೌಕರರು ಎಂದಾಕ್ಷಣ ಸರಿಯಾಗಿ ಸೇವ ನಿಡುವುಲ್ಲಾ ಎಂಬ ಅಭಿಪ್ರಾಯವನ್ನು  ಕಿರಿಯ ಅರೋಗ್ಯ ಸಹಾಯಕಿ ಸುಳ್ಳಾಗಿಸಿರುವದು ಈ ಎರಡು ನಿದರ್ಶನಗಳಿಂದ ಕಂಡು ಬರುತ್ತದೆ, ಅವರು ರಜೆಯಲ್ಲಿ ಇದ್ದರು ಸಹ ಆಶಾ ಕಾರ್ಯಕರ್ತೆಯ ಸಹಕರಂದೊದಿಗೆ ಒಂದು ಅಪಾಯದ ಹೆರಿಗೆಯನ್ನೂ ಹಾಗೂ ಒಂದು ಮಗುವು HIV-ಸೋಂಕಿಗೆ ಒಳಗಾಗುವುದನ್ನು  ತಪ್ಪಿಸಿದ್ದಾರೆಂದರೆ ತಪ್ಪಾಗಲಾರದು.

ಇಂದು ಸರಕಾರ  ವಿಷೇಶವಾಗಿ ವೈಧ್ಯಕೀಯ ತಂಡಕ್ಕೆ HIV- ಸೋ೦ಕಿತ ಮಹಿಳೆಗೆ ಹೆರಿಗೆಮಾಡುವಾಗ ವೈಧ್ಯಕೀಯ ತಂಡಕ್ಕೆ  ಯಾವುದೇ ರೀತಿಯ ತೊಂದರೆಗಳು ಮತ್ತು ಅಪಾಯ ಬರಬಾರದೆಂಬ ಉದ್ದೇಶದಿಂದ ಉಚಿತವಾಗಿ HIV-ಹೆರಿಗೆ ಕಿಟ್ ಎಂದು ಕೊಡುತಿದ್ದು ಇವುಗಳನ್ನು ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಗುವಂತೆ ಮಾಡಿದೆ. ಇದರ ಸದುಪಯೋಗ ಎಲ್ಲಾ ಜಿಲ್ಲಾ ಆಸ್ಪತ್ರೆ  ಸಿಬ್ಬಂದಿಗಳು ಪಡೆದುಕೊ೦ಡು ಕಿರಿಯ ಅರೋಗ್ಯ ಸಹಾಯಕಿಯಂತೆ HIV-ಸೋಂಕಿತ ಗರ್ಭಿಣಿಯರನ್ನು ಅಪಾಯದ ಹೇರಿಗೆಯಿ೦ದ ರಕ್ಷಿಸಬಹುದಲ್ಲವೇ.

ಎಲ್ಲಾ ಆರೋಗ್ಯ ಸಿಬ್ಬ೦ಧಿಗಳು ಈ ಮೇಲಿನ ಕಿರಿಯ ಆರೋಗ್ಯ ಸಹಾಯಕಿಯ೦ತೆ ಇರುವುದಿಲ್ಲ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ HIV-ಸೋ೦ಕಿತ ಗರ್ಭಿಣಿಯರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಇನ್ನೂ ಸಹ ಕಳ೦ಕ ಮತ್ತು  ತಾರತಮ್ಯ ಇದೆ. ಕಿರಿಯ ಆರೋಗ್ಯ ಸಹಾಯಕಿಯ೦ತೆ ಸ್ಪಂದಿಸುವ ಹೃದಯಗಳಿದ್ದರೆ  ಇದ್ದರೆ ಎಷ್ಟು ಉತಮ್ಮ……..

ಅದನ್ನೆಲ್ಲಾ ಮರೆತು  HIV-ಸೋ೦ಕಿತ ಮಹಿಳೆ ಹೆರಿಗೆಗಾಗಿ ಜಿಲ್ಲಾ ಆಸ್ಪತ್ರೆಗೆ ಬಂದಾಗ ಅವಳಿಗೆ ಸೂಕ್ತ ಚಿಕಿತ್ಸೆ ನೀಡದೆ ಆ ಮಹಿಳೆಯನ್ನೂ HIV-ಸೋ೦ಕಿತಳೆ೦ದು ಹೇಳಿ ಇನೊಂದು  ಆಸ್ಪತ್ರೆಯ ರಸ್ತೆಯನ್ನೂ ತೋರಿಸುವದು ಎಷ್ಟು ಸೂಕ್ತ ???,

 

-By Bheemaray